ಚಿತ್ರ: ರಿಷಿ

ಸಾಹಿತ್ಯ: ವಿ. ಮನೋಹರ್
ಸಂಗೀತ: ಗುರುಕಿರಣ್
ಗಾಯನ: ಉದಿತ್ ನಾರಾಯಣ್

ಏನೆಂದು ನಾ ಹೇಳಲಾರೇ... ಮೌನವೇ ಕಾಡಿದೆ!
ನಾ ಕಾಣೊ ಕನಸೆಲ್ಲ ಇಂದೇ... ಜೀವವ ತಾಳದೆ

ಈ ಮನ ಪ್ರೇಮದೆ ಬೇಡಿದ ಆಸೆ ವರವಾಗದೆ! 

ಏನೆಂದು ನಾ ಹೇಳಲಾರೇ... ಮೌನವೇ ಕಾಡಿದೆ!

ಒಂದೆ ತೋಟ ನೂರಾರು ಹೂವು!
ಇಂತಾ ನೋಟ ಚೆಂದಾ ಮುಂಜಾವು
ಹೀಗಿಯೇ! ಸುಂದರ..

ಚುಕ್ಕಿ ರೇಕೆ ರಂಗೋಲಿ ಬಂಧಾ
ಬೇರೆ ಆದರೆ ಏನು ಚಂದಾ?
ಏತಕೇ! ಅಂತರಾ..

ನೂರಾರು ರಾಗ ಹಾಡಾಗುವಾಗ ಈ ಸ್ವರ ಸೇರದೆ!

ಏನೆಂದು ನಾ ಹೇಳಲಾರೇ... ಮೌನವೇ ಕಾಡಿದೆ!

ನಾ ಕಾಣೊ ಕನಸೆಲ್ಲ ಇಂದೆ ಜೀವವ ತಾಳದೆ

ಓ! ಪುಟ್ಟ ಹಕ್ಕಿ ಆ ಗೂಡಿನಿಂದ
ಬೇರೆ ಆದ್ರೆ ಒಬ್ಬಂಟಿ ಕಂದ
ಏತಕೇ!... ಈ ಬಗೆ

ಅಂಕು ಡಂಕು ಹಾದೀಲಿ ಸಾಗಿ

ನೀರು ಕಡಲ ಸೇರೋದು ಹೋಗಿ
ಆಗಲೇ! ಹೂ ನಗೆ

ಓ! ಸಂಸಾರ ಹಾಳೆ ಒಂದೊಂದು ಮೂಲೆ ಬೆಸೆವ ಕೈ ಎಲ್ಲಿದೆ?

ಏನೆಂದು ನಾ ಹೇಳಲಾರೇ... ಮೌನವೇ ಕಾಡಿದೆ!
ನಾ ಕಾಣೊ ಕನಸೆಲ್ಲ ಇಂದೇ... ಜೀವವ ತಾಳದೆ

ಈ ಮನ ಪ್ರೇಮದೆ ಬೇಡಿದ ಆಸೆ ವರವಾಗದೆ!

Category: ಕನ್ನಡ ಚಿತ್ರಸಾಹಿತ್ಯ
Category: ರಿಷಿ ಚಿತ್ರ
Category: ವಿ.ಮನೋಹರ್ ಸಾಹಿತ್ಯ
Category:Kannada